ಪ್ರಕಟಿಸಲ್ಪಡುವ ಮಾಹಿತಿ:
1. ವಧು/ವರನ ಹೆಸರು
2. ಜನ್ಮದಿನಾಂಕ
3. ಗೋತ್ರ, ನಕ್ಷತ್ರ, ಪಾದ, ರಾಶಿ
4. ವಿದ್ಯಾರ್ಹತೆ, ಉದ್ಯೋಗ
5. ಎತ್ತರ
6. ಸಂಪರ್ಕ ಮಾಹಿತಿ (ಮಾತಾ-
ಪಿತೃಗಳ / ಪೋಷಕರ ಹೆಸರು
ಮೊಬೈಲ್ ಸಂ. ಮತ್ತು
ಇ-ಮೇಲ್ ಐಡಿ

ಮೇಲ್ಕಾಣಿಸಿದ ಮಾಹಿತಿಗಳನ್ನು ಕಳುಹಿಸಿದಲ್ಲಿ ಅವುಗಳನ್ನು ಬೃಹಚ್ಚರಣ ಸಂಚಿಕೆಯಲ್ಲಿ ಪ್ರಕಟಿಸಬಹುದು. ಆಸಕ್ತರು ಈ ಮಾಹಿತಿಗಳನ್ನು ಬಳಸಿಕೊಂಡು ಮುಂದುವರೆಯಬಹುದು.

ಈ ಪ್ರಕಟಣೆಗೆ ಕೆಳಕಾಣಿಸಿದ ಮಿತಿಗಳಿರುತ್ತವೆ.

1. ಮಾತುಕಥೆಗಳ ಫಲಿತಾಂಶಗಳಿಗೆ ಸಂಘವು ಜವಾಬ್ದಾರಿಯಾಗಿರುವುದಿಲ್ಲ.

2. ಮೇಲ್ಕಾಣಿಸಿದ ಕನಿಷ್ಠ ಮಾಹಿತಿಗೆ ಹೊರತಾದ ವಿಷಯಗಳನ್ನು ವಧು-ವರರ ಕುಟುಂಬದವರು ಪರಸ್ಪರ ಸಂಪರ್ಕಿಸಿ ಪಡೆದುಕೊಳ್ಳಬೇಕು.

3. ಈ ಸಂಬಂಧದಲ್ಲಿ ಸಂಘದ ಪಾತ್ರವು ಸಂಘದ ಸದಸ್ಯರು ಮತ್ತವರ ಕುಟುಂಬದವರ ಕನಿಷ್ಠ ಮಾಹಿತಿಯನ್ನು ಪ್ರಕಟಿಸುವುದಕ್ಕೆ ಸೀಮಿತವಾಗಿರುತ್ತದೆ. ನಂತರದ ಮಾತುಕಥೆಗಳಲ್ಲಿ ಸಂಘದ ಪಾತ್ರವಿರುವುದಿಲ್ಲ.

4. ಒದಗಿಸಲ್ಪಟ್ಟ ಮಾಹಿತಿಗಳ ನಿಖರತೆಗೆ ಸಂಘವು ಜವಾಬ್ದಾರಿಯಾಗಿರುವುದಿಲ್ಲ.

ಪ್ರಕಟಿಸಬೇಕಾದ ಮಾಹಿತಿಯನ್ನು

ಸಂಪಾದಕರು
ಬೃಹಚ್ಚರಣ

27/1, Bull Temple Road

Basavanagudi

Bengaluru – 560004

        

ಈ ವಿಳಾಸಕ್ಕೆ ಅಂಚೆಯ ಮೂಲಕ
ಅಥವಾ
ಇ-ಮೇಲ್ ಖಾತೆ
magazines@mmdbs.in ಗೆ ಕಳಿಸಬೇಕು.

ನಮ್ಮ ಸಮುದಾಯದಲ್ಲಿ ಇರಬಹುದಾದ ವಧು-ವರರಿಗೆ ಕಂಕಣಬಲವು ಕೂಡಿಬರಲು, ತನ್ಮೂಲಕ ಬೃಹಚ್ಚರಣ ಕುಟುಂಬಗಳ ನಡುವೆ ಹೊಸ ಸಂಬಂಧಗಳು ಉಂಟಾಗಲು ಬೃಹಚ್ಚರಣ ದ ವೇದಿಕೆ ನಿಮಿತ್ತವಾಗಲಿ ಎಂಬುದು ನಮ್ಮ ಆಶಯ.